ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ರೆಡಿಯಿಲ್ಲ. ಆದ್ರೆ ನಾವು ಬಿಡಲ್ಲ. ಇಂತಹದ್ದೊಂದು ಹೈಡ್ರಾಮಕ್ಕೆ ನಾಂದಿಹಾಡಿತು.

ಜಿಲ್ಲಾ ಪಂಚಾಯತ್ ನಲ್ಲಿ ಇಂದು ತಿಂಗಳ ಕೆಡಿಪಿ ಸಭೆಗೆ ಅಧ್ಯಕ್ಷೆ ಸೌಭಾಗ್ಯಬಸವರಾಜನ್  ಬರುತ್ತಿದ್ದಂತೆ ಅವರನ್ನು ಯಾವುದೇ ಕಾರಣಕ್ಕೆ ಸಭೆಗೆ ತರಳಲು ಜಿಲ್ಲಾ ಪಂಚಾಯತ ಮಹಿಳಾ ಸದಸ್ಯರು ತಡೆಯಲು ಮುಂದಾದರು. ಆಗ ತಕ್ಷಣ ಸೌಭಾಗ್ಯ ಮೇಡಂ ಪೊಲೀಸರನ್ನು ಕರೆಯಿಸಿ ಸ್ವಲ್ಪಹೊತ್ತು ಎಳೆದಾಟ ನಡೆಯಿತು ನಂತರ ಸಭೆಗೆ ಸೌಭಾಗ್ಯ ಮೇಡಂ ಹೋದರು.

ಇತ್ತ ಹೊರಗಡೆ ಜಿಲ್ಲಾ ಪಂಚಾಯತ್ ಸದಸ್ಯೆರುಗಳಾದ  ಬಾಗೂರು ಕ್ಷೇತ್ರದ ವಿಶಾಲಾಕ್ಷಿ,  ಮಸ್ಕಲ್ ಕ್ಷೇತ್ರದ ಶಶಿಕಲಾ ಬೆಂಬಲಿಗರಿಂದ ಪ್ರತಿಭಟನೆ ನಡೆಸಲು ಮುಂದಾರು.

ಜಿಲ್ಲಾ ಪಂಚಾಯತ್ ಗೆ ಹೊಸ ಸದಸ್ಯರು ಆಯ್ಕೆಗೊಂಡಾಗ ಅಧ್ಯಕ್ಷ ಸ್ಥಾನ ಲೇಡಿಗೆ ಬಂತು ಆಗ ಅಧ್ಯಕ್ಷ ಸ್ಥಾನವನ್ನು 15 ತಿಂಗಳಿಗೊಬ್ಬರಂತೆ ಅಧ್ಯಕ್ಷ ಸ್ಥಾನವನ್ನು ಹಂಚಿಕೊಳ್ಳಲಾಯಿತು,. ಮೊದಲಿಗೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷರಾದರೆ ನಂತರ 15 ತಿಂಗಳಿಗೆ ರಾಜೀನಾಮೆ ಕೊಡಬೇಕು ಆನಂತರ ಹಿಂದುಳಿದ ವರ್ಗಕ್ಕೆ ಸೇರಿದ ಮಸ್ಕಲ್ ಕ್ಷೇತ್ರದ ಶಶಿಕಲಾ ಅವರಿಗೆ ಬಿಟ್ಟು ಕೊಡಬೇಕೆಂದು ಒಡಂಬಡಿಕೆ ಜಿಲ್ಲಾ ಮಂತ್ರಿ ಆಂಜನೇಯರು ಹಾಗೂ ಶಾಸಕರುಗಳ ನಡುವೆ ಈ ಮಾತು ಕತೆ ನಡೆದಿತ್ತು.

ಆದರೆ ಸೌಭಾಗ್ಯ ಬಸವರಾಜನ್ ಅಧಿಕಾರ ಮುಗಿದು ನಾಲ್ಕು ತಿಂಗಳಾದರೂ ಸಹ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿಲ್ಲ ಹಾಗಾಗಿ ಇಂದು ಸೌಭಾಗ್ಯ ಬಸವರಾಜನ್ ಕೆಡಿಪಿ ಸಭೆಗೆ ಹೋಗದಂತೆ ಮುತ್ತಿಗೆ ಹಾಕಿದರು. ಪೊಲೀಸರಿಂದ ಸಭೆಗೆ ಸೌಭಾಗ್ಯ ಹೋದರು.

ಸೌಭ್ಯಾಗ್ಯ ಬಸವರಾಜನ್  ಅವರಿಗೆ ಒಡಂಬಡಿಕೆ ಮುರಿಯುವುದು ಹೊಸದೇನಲ್ಲಾ,  ಈ ಹಿಂದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾಗ  ಅಂದು ಸಹ ಒಡಂಬಡಿಕೆ ಆಗಿತ್ತು. ಅಂದು ಸಹ ಸೌಭಗ್ಯ ಬಸವರಾಜನ್ ಒಡಂಬಡಿಕೆಗೆ ಬೆಲೆಕೊಡದೇ ಅಧ್ಯಕ್ಷ ಸ್ಥಾನವನ್ನು ಮುಂದುವರೆಸಿದ್ದು ಇತಿಹಾಸ.