ಚಿತ್ರದುರ್ಗ: ಶ್ರೀರಾಮುಲು ಮತ್ತು ಸಿದ್ದರಾಮಯ್ಯಗೆ ಸೋಲಿನ ಭೀತಿ ಹೆಚ್ಚಾಗಿದೆ ಹಾಗಾಗಿ ನಟರನ್ನು ಕರೆಸಿಕೊಂಡು ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದರುಶನ ಪಡೆದು ಪಕ್ಷದ ಪ್ರಚಾರದ ಸಮಯದಲ್ಲಿ ಮಾತನಾಡಿದರು. ನಾನು ಯಾವ ನಟರನ್ನು ಪ್ರಚಾರಕ್ಕೆ ಆಹ್ವಾನಿಸಿಲ್ಲ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ವಿರುದ್ದ ಮಾತನಾಡಲು ಯಾವುದೇ ಸರಕಿಲ್ಲ ಹಾಗಾಗಿ ಮೋದಿಗಾಗಲಿ, ಸಿದ್ದರಾಮಯ್ಯಗಾಗಲಿ ನಮ್ಮ ವಿರುದ್ದ ಮಾತನಾಡಲು ವಿಷಯವಿಲ್ಲ, ಹೀಗಾಗಿ ಅವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾತನಾಡುತ್ತಾರೆ ಎಂದು ಎರಡು ಪಕ್ಷದ ಮೇಲೆ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.