ಕಲಬುರ್ಗಿ: ಗಹ್ರಣ ಬಂದಾಗ ಜನರು ಏನೆಲ್ಲಾ ಮಾಡುತ್ತಾರೆ. ಮನೆಯಲ್ಲಿ ನೀರು ಇದ್ರೆ ದರ್ಬೆ ಹಾಕುವುದು. ಗ್ರಹಣ ಬಿಡುವ ತನಕ ಅಡಿಗೆ ಮಾಡದಿರುವುದು. ಉಪವಾಸ ಇರುವುದನ್ನು ನೋಡಿರುತ್ತೀರ ಆದ್ರೆ ಇಲ್ಲಿ ಮಕ್ಕಳನ್ನು ಗ್ರಹಣ ಬಿಡುವ ತನಕ ಮಣ್ಣಿನಲ್ಲಿ ಹೊತಿರುವ ಘಟನೆ ಕೇಳಿದರೆ….

ಕಂಕಣ ಸೂರ್ಯಗ್ರಹಣ ಹಿನ್ನೆಲೆ ಮೂಢನಂಬಿಕೆಯಿಂದ ಕುಟುಂಬವೊಂದು ಮಕ್ಕಳನ್ನು ಕುತ್ತಿಗೆಯವರೆಗೆ ಹೂತಿರುವ ಘಟನೆ ಕಲಬುರಗಿ ಜಿಲ್ಲೆಯ ತಾಜಾ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.

ಗ್ರಹಣದ ವೇಳೆ ಮಕ್ಕಳಿಗೆ ಕೇಡಾಗಲಿದೆ ಎಂಬ ಮೂಢನಂಬಿಕೆಯಿಂದ ಮಕ್ಕಳನ್ನು ಕಸದ ಗುಂಡಿಯಲ್ಲಿ ಹೂಳಲಾಗಿದ್ದು, ಗ್ರಹಣ ಮುಗಿದ ಬಳಿಕ ಹೊರತೆಗೆಯಲಾಗುವುದು ಎಂದು ಮಕ್ಕಳ ಪೋಷಕರು ಹೇಳುತ್ತಾರೆ.!