ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸೂಗೂರಿನಲ್ಲಿ ಜೂನ್ 25 ರಂದು 27.2 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

    ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 9.3 ಮಿ.ಮೀ., ಬಬ್ಬೂರು 10, ಈಶ್ವರಗೆರೆ 8.2, ಇಕ್ಕನೂರು 20. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 2.4, ಹೆಚ್.ಡಿ.ಪುರ 5, ತಾಳ್ಯ 1.2. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 8, ಪರಶುರಾಂಪುರ 13.2, ನಾಯಕನಹಟ್ಟಿ 7.2, ದೇವರ ಮರಿಕುಂಟೆ 10.4, ತಳಕು 10.6. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ 1.8, ಚಿತ್ರದುರ್ಗ-2 ರಲ್ಲಿ 2.4, ಐನಹಳ್ಳಿ 1.8, ತುರುವನೂರು 4.2. ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರು 2, ಬಿ.ಜಿ.ಕೆರೆ 8.2, ರಾಂಪುರ 18, ದೇವಸಮುದ್ರ 13.2, ರಾಯಾಪುರ 01. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 5.8, ಮತ್ತೋಡು 10, ಶ್ರೀರಾಂಪುರ 10.2, ಮಾಡದಕೆರೆ 9.2 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.