ಬೆಂಗಳೂರು: ದಾಖಲೆಯಲ್ಲಿರುವ ಆಸ್ತಿಯ ಚದರಡಿಯೇ ಬೇರೆ, ಪಾಲಿಕೆಗೆ ಮಾಹಿತಿ ನೀಡಿರುವ ಆಸ್ತಿಯೇ ಬೇರೆ ಆಗಿದೆ. ಕಡಿಮೆ ಆಸ್ತಿಗೆ ತೆರಿಗೆ ಪಾವತಿಸಿ ವಂಚಿಸಲಾಗಿದೆ ಅಂತ ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದ್ದಾರೆ.

ವಂಚನೆ ಹಾಗೂ ತೆರಿಗೆ ಉಳಿಸಿಕೊಂಡವರಲ್ಲಿ ಮಾಜಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಕುಟುಂಬ ಕೂಡ ಕೋಟ್ಯಂತರ ರೂ.ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಲದಲ್ಲದೆ ದಾಖಲೆ ಸಮೇತ ಮಾಧ್ಯಮದವರ ಮುಂದೆ ಬಿಡುಗಡೆಮಾಡಿದ್ದಾರೆ.

2008-09 ರಿಂದ ಇಲ್ಲಿಯವರೆಗೆ ತೆರಿಗೆ ವಂಚನೆ ದೇವೇಗೌಡರ ದೊಡ್ಡ ಸೊಸೆ ಹೆಚ್. ಕವಿತಾ 55,21,479 ರೂ, ದೇವೇಗೌಡರ ಮಗಳು ಹೆಚ್.ಡಿ ಶೈಲಾ 55,21,479 ರೂ, ಭವಾನಿ ರೇವಣ್ಣ 41,79,440, ಹೆಚ್.ಡಿ‌ ಅನುಸೂಯ 55,21,479, ಅನಿತಾ ಕುಮಾರಸ್ವಾಮಿ 54,85,521, ಹೆಚ್.ಡಿ ರಮೇಶ್ 55,21,389 ದೇವೇಗೌಡರ ಕುಟುಂಬವೇ ಒಟ್ಟು 3,17,50,787 ರೂ ವಂಚನೆ ಮಾಡಿದ್ದಾರೆ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.