ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರ ದಿನೇ ದಿನೆ ರಂಗೇರುತ್ತಿದ್ದು ಸುಮಲತಾ ಪರ ಸಿನಿ ನಟರು ಬೆಂಬಲಕ್ಕೆ ನಿಂತರೆ, ಈಗ ಬಿಜೆಪಿ ಮುಖಂಡರಾದ ಬಿಎಸ್. ಯಡಿಯೂರಪ್ಪನವರು ಬೆಂಬಲಕ್ಕೆ ನಿಂತಿದ್ದಾರೆ.!

ಸುಮಲತಾ ಅಂಬರೀಷ್​ ಅವರ ಪರ ನಾನು ಪ್ರಚಾರಕ್ಕೆ ಹೋಗುತ್ತೇನೆ. ಜೊತೆಗೆ ಪಕ್ಷದ ನಾಯಕರೆಲ್ಲರೂ ಅವರ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ಸುಮಲತಾ ಗೆಲುವು ಖಚಿತವಾಗುತ್ತಿದ್ದಂತೆ ಅದನ್ನು ಸಹಿಸದೆ ಜೆಡಿಎಸ್​ ಕಾರ್ಯಕರ್ತರು ದರ್ಶನ್​ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ರು.!