ಮೈಸೂರು: ನಟಿ ಸುಮಲತಾ ಪ್ರಚಾರಕ್ಕಾಗಿ ನನ್ನನ್ನು ಕರೆದಿಲ್ಲ. ಕರೆದರೂ ನಾನು ಹೋಗುವುದಿಲ್ಲ ಎಂಬುದಾಗಿ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

 

ರಾಜಕೀಯಕ್ಕೆ ಇಳಿಯಬೇಕಾದರೆ ಸ್ವಲ್ಪ ಬುದ್ಧಿ ಬೇಕು. ನಮಗೆ ಅಷ್ಟು ಬುದ್ಧಿ ಇಲ್ಲ. ಈಗ ಸ್ವಲ್ಪ ಬುದ್ಧಿ ಬಂದಿದ್ದು, ಅದನ್ನು ಕಾಪಾಡಿಕೊಳ್ಳುತ್ತೇನೆ ಎಂದರು.

 

ನಾನು ಹಿಂದೆ ನನ್ನ ಪತ್ನಿಗಾಗಿ ಪ್ರಚಾರಕ್ಕೆ ತೆರಳಿದ್ದೆ. ಈಗ ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ನನ್ನ ಪತ್ನಿ ಹೋಗಬಹುದು. ನಾನು ಬರಬೇಕೆಂದು ಮಧು ಕೂಡ ಬಯಸಲ್ಲ ಎಂದರು.