ಮಂಡ್ಯ: ರಾಜ್ಯ ಚುನಾವಣಾ ಆಯೋಗವು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಕಹಳೆಯನ್ನು ಚಿಹ್ನೆಯನ್ನಾಗಿ ನೀಡಿದೆ.

ಮೂರು ರೈತರ ಪರ ಚಿಹ್ನೆಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಕಬ್ಬಿನಗದ್ದೆ ಮುಂದೆ ರೈತ, ಕಹಳೆ ಊದುತ್ತಿರುವ ರೈತ, ತೆಂಗಿನ ತೋಟದ ಚಿಹ್ನೆಗಳನ್ನು ಸುಮಲತಾ ಆಯ್ಕೆ ಮಾಡಿದ್ದರು. ಆದರೆ ಚುನಾವಣೆ ಆಯೋಗ ಸುಮಲತಾ ಅಂಬರೇಶ್ ಗೆ ಕಹಳೆ ಚಿಹ್ನೆ ದೊರೆತಿದೆ.

ಈ ಕಹಳೆ ಚಿಹ್ನೆ ಜೆಡಿಎಸ್ ಎದೆಯಲ್ಲಿ ಮೊಳಗಲಿದೆಯ ಎಂಬುದು ಕಾದು ನೋಡುವ ಸರದಿ ಮಂಡ್ಯ ಜನರದು.