ಹಾವೇರಿ: ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲಿಸಿದ ದರ್ಶನ್-ಯಶ್​ ಜೊತೆಗೆ ನಟಿ ಹಾಗೂ ಬಿಜೆಪಿ ಮುಖಂಡೆ ಶ್ರುತಿ ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಹಾಗೂ ಯಶ್​ ಅವರನ್ನು ನೋಡಿ ಜನ ಅಭಿಮಾನದಿಂದ ಮುಂದೆ ಬಂದಿದ್ದಾರೆ. ಸುಮಲತಾ ಅವರು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ, ಮಹಿಳೆಯರ ಗೌರವವನ್ನು ಪ್ರತಿನಿಧಿಸುತ್ತಿದ್ದಾರೆ. ಸೋಲಿನ ಭೀತಿಯಲ್ಲಿ ಮೈತ್ರಿ ನಾಯಕರು ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.