ಭದ್ರಾವತಿ : ಲೋಕಸಭಾ ಚುನಾವಣೆಯಲ್ಲಿ ಇನ್ನೂ ಮತದಾರ ಮತಚಲಾಯಿಸಿಲ್ಲ ಆಗಲೇ ಯಡಿಯೂರಪ್ಪರು ಸುಮಲತಾ ಅಂಬರೀಶ್ ಬಗ್ಗೆ ಭವಿಷ್ಯ ಹೇಳಿದ್ದಾರೆ ಏನಂತ.?

ಭದ್ರಾವತಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮಂಡ್ಯದಲ್ಲಿ ಸುಮಲತಾ ಗೆಲುವಿನ ಬಗ್ಗೆ  ಹೇಳುತ್ತಾ,

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಪಡೆದಾಗಿದೆ. ಆದರೆ ಎಷ್ಟು ಅಂತರ ಎನ್ನುವುದನ್ನು ತಿಳಿದುಕೊಳ್ಳಲಷ್ಟೇ ಫಲಿತಾಂಶಕ್ಕೆ ಕಾಯ ಬೇಕಾಗಿದೆ ಎಂದು ಹೇಳಿದ್ದಾರೆ.

ಹಾಗೇ ಮಾತನಾಡುತ್ತಾ, ಕಲಬುರಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ದೇವೇಗೌಡ ಸೋಲು ಖಚಿತ ಎಂದು ಭವಿಷ್ಯ ಹೇಳಿದ್ದಾರೆ.