ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಚುನಾವಣಾಧಿಕಾರಿಗಳಿಗೆ ತಮ್ಮ ಆಸ್ತಿ ವಿವಿರನ್ನು ಹೀಗೆ ನೀಡಿದ್ದಾರೆ.

ತಮಗೆ 1.42 ಕೋಟಿ ರೂ.ಸಾಲವಿದ್ದು ಕೈಯಲ್ಲಿ 12.70 ಲಕ್ಷ ರೂ.ಹಣ ಇದೆ. 1.66 ಕೋಟಿ ರೂ.ಮೌಲ್ಯದ 5.5 ಕೆಜಿ ಚಿನ್ನ, 12.57 ಲಕ್ಷ ರೂ.ಬೆಲೆಯ 31 ಕೆಜಿ ಬೆಳ್ಳಿ ಇದೆ. ಬ್ಯಾಂಕ್ ಖಾತೆಗಳಲ್ಲಿ 1.31 ಕೋಟಿ ರೂ.ಇದೆ.

ಬೆಂಗಳೂರಿನ ಜೆಪಿ ನಗರ, ಉತ್ತರಹಳ್ಳಿಯಲ್ಲಿ ಒಂದು ಮನೆ ಹಾಗೂ ಪಾಲುದಾರಿಕೆಯ ಅಪಾರ್ಟ್ ಮೆಂಟ್ ಇದೆ. ಒಟ್ಟು 5,68,62,989 ರೂ. ಮೌಲ್ಯದ ಚರಾಸ್ತಿ ಹಾಗೂ 17,72,91,150 ರೂ.ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.