ಮೈಸೂರು:ಸುತ್ತೂರು ಮಠದ ಜಾತ್ರೆ ನಡಯತ್ತಿದೆ. ಇಂದು ಕುಸ್ತಿ ಪಂದ್ಯವನ್ನು ಆಯೋಜಿಸಲಾಗಿತ್ತು. ಕುಸ್ತಿ ಚಾಲನೆಗೆಂದು ನೈಟ್ರೋಜಿನ್ ಬಲೂನ್ ಹಾರಿಸಲು ಸಕಲ ಸಿದ್ಧತೆಗಳನ್ನು ರೆಡಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಬಲೂನ್ ಸ್ಪೋಟಗೊಂಡ ಪರಿಣಾಮ ಶಿವರಾತ್ರಿ ದೇಶೀಕೇಂದ್ರ ಶ್ರೀಗಳು ಪಾರುಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಬಲೂನುಗಳು ಉದ್ಘಾಟನೆಗೂ ಮುನ್ನವೇ ಸ್ಫೋಟವಾದ ಪರಿಣಾಮ ಅವಘಡ ಸಂಭವಿಸಿತು ಎನ್ನಲಾಗಿದೆ. ಬೆಂಕಿ ತಗುಲಿದ್ದೇ ಘಟನೆಗೆ ಕಾರಣ.

ಶ್ರೀಗಳ ಪಕ್ಕದಲ್ಲಿದ್ದವರಿಗೆ ಅಲ್ಪ ಸ್ವಲ್ಪ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾರಿಗೂ ಪ್ರಾಣಾಪಯವಾಗಿಲ್ಲ ಎಂದು ತಿಳಿದುಬಂದಿದೆ.