ಬೆಂಗಳೂರು: ಸಮಿಶ್ರ ಸರಕಾರದಲ್ಲಿ ಸುಗಮ ಆಡಳಿತಕ್ಕೆ ಸಮನ್ವಯ ಸೂತ್ರಗಳನ್ನು ರಚಿಸಲಾಗಿದೆ. ಈ ಗಾಗಲೆ ಒಡಂಬಡಿಕೆಯಂತೆ, ಕಾಂಗ್ರೆಸ್‌ಗೆ 22 ಮತ್ತು ಜೆಡಿಎಸ್‌ಗೆ 12 ಖಾತೆಗಳ ಹಂಚಿಕೆಯಾಗಿವೆ. ಒಟ್ಟು ನಿಗಮ– ಮಂಡಳಿಗಳಲ್ಲಿ ಮೂರನೇ ಎರಡರಷ್ಟು ಕಾಂಗ್ರೆಸ್‌ಗೆ, ಮೂರನೇ ಒಂದರಷ್ಟು ಜೆಡಿಎಸ್‌ಗೆ ಎಂದು ತೀರ್ಮಾನವಾಗಿದ್ದು ಎರಡು ಪಕ್ಷಗಳಲ್ಲಿ ಭೀನ್ನ ಮತವಾಗದಂತೆ ನೋಡಿಕೊಳ್ಳಲು ನಾಲ್ಕು ಸೂತ್ರಗಳನ್ನು ಅಳವೆಸಿಕೊಳ್ಳಲಾಗಿದೆ.

 

1)  ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುತ್ತದೆ. ಆದಷ್ಟು ಬೇಗ ಜನರ ಮುಂದಿಡಲಾಗುವುದು.

2) ಕಾಂಗ್ರೆಸ್‌– ಜೆಡಿಎಸ್‌ನಿಂದ ಇಬ್ಬರು ವಕ್ತಾರರು ಇರುತ್ತಾರೆ. ಜಂಟಿಯಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ.

3) ನಿಗಮ ಮತ್ತು ಮಂಡಳಿಗಳಿಗೆ ಸಮನ್ವಯ ಸಮಿತಿಯ ಒಪ್ಪಿಗೆ ಮೇರೆಗೆ ನೇಮಕಗಳು ನಡೆಯುತ್ತವೆ. ಒಟ್ಟು ಹುದ್ದೆಗಳಲ್ಲಿ ಮೂರನೇ ಎರಡರಷ್ಟು ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಮೂರನೇ ಒಂದರಷ್ಟು ಜೆಡಿಎಸ್‌ಗೆ ಹಂಚಿಕೆ.

4) 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.

ಈ ಸೂತ್ರಗಳನ್ನು ಪಾಲಿಸಲು ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿದುಬಂದಿದೆ.