ಬೆಂಗಳೂರು: ಇದು ಚುನಾವಣೆ ಸಮಯವಾಗಿರುವುದರಿಂದ ಒಂದೊಂದು ಕಂಪನಿಗಳು ಚುನಾವಣೆಯ ಪೂರ್ವ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಸಮೀಕ್ಷೆಯಲ್ಲಿ ಎಷ್ಟು ಜನರನ್ನು ಮಾತನಾಡಿಸಲಾಗಿದೆ. ಎಷ್ಟು ಕ್ಷೇತ್ರಗಳನ್ನು ಸುತ್ತಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ಮುಂದೆ ಈ ಪಕ್ಷಕ್ಕೆ ಇಂತಿಷ್ಟು ಸ್ಥಾನಗಳು ಸಿಗಲಿವೆ ಎಂದು ಪ್ರಕಟಿಸಲಾಗುತ್ತದೆ.

ಮತದಾರರ ಮೇಲೆ ಎಷ್ಟು ಪ್ರಭಾವ ಬಿರುತ್ತದೋ ಏನು ಪಕ್ಷದ ಆಂತರಿಕ ವಲಯದಲ್ಲಿ ಸ್ವಲ್ಪ ವಿಚಲಿತರಾಗುತ್ತಾರೆ ಪಕ್ಷದ ಕಾರ್ಯಕರ್ತರು. ಅದೇನೆ ಇರಲಿ ಆದ್ರೆ ಸಿ.ಫೋರ್ ಸಮೀಕ್ಷೆ ಏನು ಹೇಳುತ್ತೆ.

ಬಹುತೇಕ ಮೇ ತಿಂಗಳಲ್ಲಿನಡೆಯುವ ವಿಧಾನಸಭಾ ಚುನಾವಣೆಯ ಪೂರ್ವ ಸಮೀಕ್ಷೆಯನ್ನು ಸಿ ಫೋರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 126 ಸ್ಥಾನಗಳನ್ನು, ಬಿಜೆಪಿ 70 ಸ್ಥಾನಗಳನ್ನು ಹಾಗೂ ಜೆಡಿಎಸ್ 27 ಸ್ಥಾನಗಳನ್ನು ಪಡೆಯಲಿವೆ ಎಂದು ಹೇಳಿದೆ.

ಇದೇ ಸಿ ಪೋರ್ ಸಮೀಕ್ಷೆ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿತ್ತು. ಈ ಬಾರಿ ಚುನಾವಣೇಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಸಿ ಫೋರ್ ಸಮೀಕ್ಷೆ ಹೇಳಿದೆ.