ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಇನ್ನೂ ಅಂಗೀಕಾರವಾಗಿಲ್ಲ.
ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ದಿನವೇ ಗಾಂಧೀ ಜಯಂತಿ ಮುಗಿದ ಬಳಿಕ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದರು. ಶನಿವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರವಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿಯ ವರದಿ ಹಾಗೂ ಇನ್ನೂ ಬಾಕಿ ಉಳಿದಿರುವ ಕೆಲಸಗಳ ವಿವರಗಳನ್ನು ಒಳಗೊಂಡ ಪುಸ್ತಕದ ಜತೆಗೆ ರಾಜೀನಾಮೆ ಸಹ ಸಲ್ಲಿಸಿದರು.
ಆದರೆ ರಾಜೀನಾಮೆಯನ್ನು ಅಂಗೀಕರಿಸದ ಯಡಿಯೂರಪ್ಪ, ದಸರಾ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಮುಗಿಯುವ ತನಕ ಮುಂದುವರಿಯುವಂತೆ ಸೂಚನೆ ನೀಡಿದರೆ ಎಂದು ತಿಳಿದುಬಂದಿದೆ.
No comments!
There are no comments yet, but you can be first to comment this article.