ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಕೆಲವರು ಹಣ ಮಾಡುವ ಕಳ್ಳದಾರಿ ಹಿಡಿಯುತ್ತಿದ್ದಾರೆ.

ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಇಂದು ಎರಡು ಕಡೆ ದಾಳಿ ನಡೆಸಿ ನಕಲಿ ಥರ್ಮೋಮೀಟರ್ ಮತ್ತು ನಕಲಿ ಸ್ಯಾನಿಟೈಸರ್ ಗಳನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದ್ಧಾರೆ.

ತಯಾರಕರ ಹೆಸರು, ಗುರುತಿಲ್ಲದ ಥರ್ಮೋಮೀಟರ್ ಗಳನ್ನು ಹಾಗೂ 5000 ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.