ನವದೆಹಲಿ: ಸಿಬಿಎಸ್ ಇ ಯ 10 ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 15 ರೊಳಗೆ ಘೋಷಿಸಲಾಗುವುದು ಎಂದು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (CBSE) ಶುಕ್ರವಾರ ತಿಳಿಸಿದೆ.

ಕೊರೋನಾ ವೈರಸ್ ನಿಂದಾಗಿ ಕೆಲವು ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ಇದೀಗ ಮೊದಲು ನಡೆದಿರುವ ಪರೀಕ್ಷೆಗಳಿಗೆ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಸಿಬಿಎಸ್‌ಇ ಯೋಜನೆಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮೋದನೆ ನೀಡಿದ ಬಳಿಕ ಈ ಹೇಳಿಕೆ ಹೊರ ಬಂದಿದೆ.

ಸಿಬಿಎಸ್ ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಿದೆ. ಫಲಿತಾಂಶ ಜುಲೈ ಮಧ್ಯ ಭಾಗದಲ್ಲಿ ಪ್ರಕಟವಾಗಲಿದೆ.

( ಸಾಂದರ್ಭಿಕ ಚಿತ್ರ)