ನವದೆಹಲಿ: ಲಾಕ್ ಡೌನ್ ಹಿನ್ನೆಲೆ ಮುಂದೂಡಿಕೆಯಾಗಿದ್ದ ಸಿಬಿಎಸ್‌ಇ 10ನೇ ತರಗತಿ ಬಾಕಿ ವಿಷಯಗಳ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದು, ಈಶಾನ್ಯ ದೆಹಲಿ ಹೊರತುಪಡಿಸಿ ಉಳಿದ ಕಡೆ ಸಿಬಿಎಸ್‌ಇ 10ನೇ ತರಗತಿ ಮುಖ್ಯ ಪತ್ರಿಕೆಗಳ ಪರೀಕ್ಷೆ ಪೂರ್ಣಗೊಂಡಿದೆ. ಮುಖ್ಯವಲ್ಲದ ಒಂದೆರಡು ವಿಷಯಗಳ ಪರೀಕ್ಷೆ ಬಾಕಿ ಉಳಿದಿದ್ದು, ಅವುಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.