ಚಿತ್ರದುರ್ಗ: ಚಿತ್ರರಂಗದ ಸಮಸ್ಯೆ ಉದ್ಬವಿಸಿದಾಗ ನಾಡಿನ ಎಲ್ಲಾ ರೈತರು ಅವರ ಸಮಸ್ಯೆಗೆ ಸ್ಪಂದಿಸಿ ಬೆಂಬವಾಗಿ ನಿಲ್ಲುತ್ತಾರೆ ಆದರೆ ಅದೇ ರೈತ ಆತ್ಮಹತ್ಯೆಗೆ ಮುಂದಾದಗ ಏಕೆ ಸಿನಿಮಾದವರು ಸ್ಪಂದಿಸುವುದಿಲ್ಲ ಎಂದು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕರುಬೂರು ಶಾಂತರಕುಮಾರ್ ಸಿನಿಮಾದವರಿಗೆ ಪ್ರಶ್ನೆ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಸಿನಿಮಾ ನೋಡುವುದು ಬಹುತೇಕ ರೈತಾಪಿ ಮಂದಿಯವರು ಹಾಗೂ ಎಲ್ಲಾ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ರೈತರು. ಆದರೆ ರೈತರ ಸಂಕಷ್ಟದಲ್ಲಿದ್ದಾಗ ಚಿತ್ರರಂಗದವರು ಏಕೆ ಬೇಂಬಲಿಸಬಾರದು. ಅದರಂತೆ ಎಲ್ಲಾ ಮಠಾಧೀಶರುಗಳು, ಬುದ್ದಿ ಜೀವಿಗಳು ಪ್ರಗತಿ ಪರ ಚಿಂತಕರು ಇಂದು ಕಷ್ಟದಲ್ಲಿಇರುವ ರೈತನ ಪರವಾಗಿ ಟೊಂಕಟ್ಟಿಕೊಂಡು ಹೋರಾಟಕ್ಕೆ ಮುಂದಾದರೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಆತ್ಮವಿಶ್ವಾಸ ತುಂಬಿದಂತ್ತಾಗುತ್ತದೆ ಎಂದರು.
ಮುಂದಿನ ತಿಂಗಳು ಆತ್ಮಹತ್ಯೆ ತಡೆಗೆ, ರೈತರ ನಡೆಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಹೋರಾಟಕ್ಕೆ ಎಲ್ಲಾ ರೈತ ಸಂಘದವರು ಒಂದಾಗಿ ಈ ಹೋರಾಟವನ್ನು ರೂಪಿಸಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ರೈತರ ಪರವಾಗಿ ಮಾತಾಡುತ್ತಾರೆ ಹಾಗೂ ಪ್ರಣಾಳಿಕೆಗಳಲ್ಲಿ ಚಿತ್ರಿಸುತ್ತಾರೆ. ಅಧಿಕಾರಕ್ಕೆ  ಬಂದಮೇಲೆ ರೈತರನ್ನು ಕಡೆಗಣಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಯಲು ಸೀಮಿಯೆ ಹೋರಾಟಗಾರ ಲಕ್ಷ್ಮಣಹೂಗಾರ್, ಕೊಂಚೆ ಶಿವರುದ್ರಪ್ಪ, ಬಾಳೆಕಾಯಿತಿ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.