.ಬೆಂಗಳೂರು: ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದ ಬಗ್ಗೆ ಬೇಕಾ ಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯಗೆ  ಹೈಕಮಾಂಡ್ ಬ್ರೇಕ್ ಹಾಕಲು ನಿರ್ಧರಿಸಿದೆಯಂತೆ.!

ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ತಮ್ಮ ಆಪ್ತರ ಬಳಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಇರತ್ತೋ ಇಲ್ಲವೋ ಹೇಳೋಕೆ ಆಗಲ್ಲ ಎಂಬ ವಿವಾದಾತ್ಮಕ ಮಾತುಗಳನ್ನು ಆಡಿದ್ದರು. ಆ ಮಾತಿನ ವಿಡಿಯೋ ವೈರಲ್ ಆಗಿತ್ತು.

ಸಿದ್ದರಾಮಯ್ಯ ಮಾತುಗಳಿಂದ ಹೈಕಮಾಂಡ್ ಗರಂ ಆಗಿದೆಯಂತೆ ಹಾಗಾಗಿ ಹೈಕಮಾಂಡ್ ಸಂದೇಶವನ್ನು ರವಾನಿಸಿದ್ದು ತಮ್ಮ ಈ ವರ್ತನೆಯ ಬಗ್ಗೆ ಈಗ ಸ್ಪಷ್ಟನೆ ನೀಡಬೇಕಿರುವುದು ಹೈಕಮಾಂಡ್ ನಾಯಕರಿಗಲ್ಲ. ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಕೊಡಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ಖರ್ಗೆ ಬಳಿ ಚರ್ಚಿಸಿ ಎಂದು ಕೈ ಹೈಕಮಾಂಡ್ ಹೇಳಿದೆಯಂತೆ ಹಾಗಾಗಿ ಇಂದು ತಪ್ಪಿದರೆ ನಾಳೆ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆನಡೆಸಲಿದ್ದಾರೆ ಎಂದು ತಿಳಿದುಬಂದಿದೆ.