ಚಿತ್ರದುರ್ಗ: ಸಿದ್ದರಾಮಯ್ಯ ಸೋಲುವ ಬೀತಿಯಿಂದ ಬಾದಾಮಿಗೆ ಪಲಾಯನಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಹಿರಿಯೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಪಕ್ಷದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದರು.

ಮಿತ್ರರೇ ನಾನು ಮೂರು ಬಾರಿ ಚಿತ್ರದುರ್ಗಕ್ಕೆ ಆಗಮಿಸಿದಾಗಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಿಜೆಪಿ ಗೆಲ್ಲುವ ಭರವಸೆ ಮೂಡಿಸಿದ್ದೀರಿ, ನಾನು ರಾಜ್ಯದಾದ್ಯಂತ ಭೇಟಿ ನೀಡಿ ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ ಎಂದರು.

ನಾವು ವಿವಿ ಸಾಗರದಿಂದ ಈ ಭಾಗದ ರೈತರಿಗೆ ಐದು ಟಿಎಂಸಿ ನೀರು ಕೊಡುವ ಮೂಲಕ ಮತ್ತೆ ಸಕ್ಕರೆ ಕಾರ್ಖಾನೆ ತೆರೆಯುತ್ತೇವೆ ಎಂದರು. ನಿಮಗೆ ಕಮಿಷನ್ ಸರ್ಕಾರ ಬೇಕಾ? ಕಮಿಟೆಡ್ ಸರ್ಕಾರ ಬೇಕಾ? ಸಿದ್ದರಾಮಯ್ಯ ಬೇಕಾ? ಯಡಿಯೂರಪ್ಪ ಬೇಕಾ? ನೀವೇ ಹೇಳಿ..
12ನೇ ತಾರಿಖು ನಡೆಯುವ ಚುನಾವಣೆಯಲ್ಲಿ ಕಮಲಕ್ಕೆ ಮತನೀಡುವ ಮೂಲಕ ಪೂರ್ಣಿಮಾ ಅವರನ್ನು ಗೆಲ್ಲಿಸಿ ಎಂದು ಮನವಿಮಾಡಿದರು.