ಬೆಂಗಳೂರು : ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದ್ದು ಈ ಕಾರಣಕ್ಕಂತೆ.? ಯಡಿಯೂರಪ್ಪ ಆಪರೇಷನ್ ಕಮಲದ  ಆಡಿಯೋ ಕುರಿತು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ದೂರು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಪತನವಾದ ವೇಳೆ ಬಹಿರಂಗಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರ ಧ್ವನಿಯಿದ್ದ ಆಡಿಯೋ ಈಗ ಕಮಲ ಪಾಳಯಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಈ ಆಡಿಯೋ ಲೀಕ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನವಾಗುವ ವೇಳೆ ಬಿ.ಎಸ್.ಯಡಿಯೂರಪ್ಪ ಅವರ ಧ್ವನಿ ಇತ್ತೆನ್ನಲಾದ ಆಡಿಯೋದಲ್ಲಿ ಆಪರೇಶನ್ ಕಮಲದ ಬಗ್ಗೆ ಹಾಗೂ ಅಮಿತ್ ಶಾ ಹೆಸರು ಕೂಡ ಪ್ರಸ್ತಾಪಿಸಿದ್ದರು. ಈ ಹಿನ್ನಲೆಯಲ್ಲಿ ಅಮಿತ್ ಶಾ ರಾಜೀನಾಮೆಗೂ ಉಭ ನಾಯಕರು ಆಗ್ರಹಿಸಿದ್ದಾರೆ. ಸಂವಿಧಾನ ಬೀಳಿಸುವ ಪ್ರಯತ್ನ ಸಂವಿಧಾನ ವಿರೋಧಿ ಕೃತ್ಯ. ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಇನ್ನು ಆಡಿಯೋ ಪ್ರತಿ  ಸುಪ್ರೀಂಕೋರ್ಟ್ ಗೂ ಕಳುಹಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.