ಮೈಸೂರು:  ಚುನಾವಣೆಗೂ ಮುನ್ನಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಸೋಲ್ಲುತ್ತೀರ ಅಂತ ಹೇಳಿದ್ದು ವಿಧಾನಪರಿಷತ್ ಸದಸ್ಯ ಧರ್ಮಸೇನಾ ಭವಿಷ್ಯ ಹೇಳಿದ್ದಾರಂತೆ

ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಅವರು ಮಾತನಾಡಿ ನಾನೂ ಚಾಮುಂಡೇಶ್ವರಿ ಕ್ಷೇತ್ರ ಬೇಡ ವರುಣಾ ಕ್ಷೇತ್ರದಲ್ಲೇ ನಿಲ್ಲಿ ಸರ್ ಅಂತ ಹೇಳಿದ್ದೆ. ನನಗೆ ಇಲ್ಲದ ಭಯ ನಿನಗೆ ಯಾಕಯ್ಯ ಅಂತ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದರು ಅಂತ ಧರ್ಮಸೇನಾ ಹೇಳಿದರು.

ಇನ್ನು ಇದೇ ವೇಳೆ ಅವರು ಮಾತನಾಡಿ ಮುಂದೆ ಸಿದ್ದರಾಮಯ್ಯನವರು ಮುಂದೆ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ. ಇದು ಮಾಧ್ಯಮಗಳಲ್ಲೂ ಕೂಡ ಬರುತ್ತಿದೆ. ಸಿದ್ದರಾಮಯ್ಯ ಅವರಿಗೆ ಮುಂದೆ ಒಳ್ಳೆಯ ಹುದ್ದೆ ಸಿಗಲಿದೆ ಅಂತ ಭವಿಷ್ಯ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಹೇಳಿದ್ದಾರೆ.