ಬೆಂಗಳೂರು: ಕಾಂಗ್ರೆಸ್ ನ ಎಲ್ಲಾ ಶಾಸಕರುಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಔತಣ ಕೂಟ ಏರ್ಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಹಿಂದೆಲ್ಲಾ ಇಂತಹ ಔತಣ ಕೂಟಗಳು ರಾಜಕೀಯದ ದಾಳದ ಕೇಂದ್ರವಾಗಿರುತಿತ್ತು. ಇದು ಸಹ ಏಕಾಗಬಾರದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದ್ರೆ ಹೇಳಿ ಕೇಳಿ ಸಮಿಶ್ರ ಸರಕಾರ. ಧರ್ಮಸ್ಥಳದ ಶಾಂತಿವನದ ಪ್ರಕೃತಿ ಚಿಕಿತ್ಸಾಲಯದಲ್ಲಿದ್ದು ಕೊಂಡೆ ಮಾಜಿ ಮಂತ್ರಿ ಸಿದ್ದರಾಮಯ್ಯರು ಸರಕಾರದ ಬಗ್ಗೆ ಹಲವು ದಾಳಗಳನ್ನು ಬಿಡಲಾಗಿತ್ತು. ಚಿಕಿತ್ಸೆಯಿಂದ ಬೆಂಗಳೂರಿಗೆ ಬಂದನಂತರ ನಾನು ಹೇಳೇ ಇಲ್ಲ ಯಾವುದರ ಬಗ್ಗೆ ಹೇಳಿಯೇ ಇಲ್ಲ ಅಂತ ಹೇಳಿ ಜಾರಿಕೊಂಡರು.

ಇಂದು ಹೋಟೆಲ್ ನಲ್ಲಿ ತಮ್ಮ ಶಾಸಕರುಗಳಿಗೆ ಔತಣ ಕೂಟ ಏರ್ಪಡಿಸಿರುವುದು ಶಕ್ತಿ ಪ್ರದರ್ಶನದ ಔತಣ ಕೂಟ ವೇದಿಕೆಯಾಗುತ್ತದಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.