ಬೆಂಗಳೂರು ದೋಸ್ತಿ ಸರಕಾರ ಸಮನ್ವಯ ಸಮಿತಿಯನ್ನು ಹೊತ್ತಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ನಲ್ಲಿ ಸ್ಥಾನ ಸಿಕ್ಕಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ 23 ಜನರ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಇದರಲ್ಲಿ ಕರ್ನಾಟಕದ ಸಿದ್ದರಾಮಯ್ಯ ಹಾಗೂ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದಲ್ಲದೇ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪಗೆ ಸ್ಥಾನ ಸಿಕ್ಕಿದೆ.ಹಾಗಾಗಿ ಇನ್ನು ಮುಂದೆ ಸಿದ್ದರಾಮಯ್ಯರು ಪಕ್ಷದಲ್ಲಿ ಪವರ್ ಫುಲ್ ವ್ಯಕ್ತಿ.!