ಧರ್ಮಸ್ಥಳ: ಸಿದ್ದರಾಮಯ್ಯ ಇಲ್ಲ ಅಂದ್ರೆ ಸರ್ಕಾರವೇ ಇರಲ್ಲ ಅಂತ  ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಮ್ಮಿಶ್ರ ಸರ್ಕಾರಕ್ಕೆ ಬುನಾದಿ ಹಾಕಿದ್ದಾರೆ ಅವರನ್ನು ಕಡೆಗಣಿಸಿದರೆ ಸರ್ಕಾರವೇ ಉಳಿಯಲ್ಲ’ ಎಂದಿರುವ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಣದ ಕಡೆಯಿಂದ ಎಚ್ಚರಿಕೆ ರವಾನಿಸಿದ್ದಾರೆ.

ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಹೇಳಿರುವ ವಿಚಾರ  ಈಗ ರಾಜಕೀಯದಲ್ಲಿ ಬಿರುಗಾರಿ ಎಬ್ಬಿಸಿದೆ. ನಾಳೆ ಪ್ರಕೃತಿವನದಿಂದ ಸಿದ್ದರಾಮಯ್ಯರು ಬೆಂಗಳೂರಿಗೆ ಬಂದಾಗ ರಾಜಕೀಯದಲ್ಲಿ ಹೊಸ ಆಟ ಶುರುವಾಗಲಿದೆಯಂತೆ