ಬೆಂಗಳೂರು: ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ ಇದ್ದಾಗ ಮಾಜಿ ಮಂತ್ರಿ ಸಿದ್ದರಾಮಯ್ಯರ ಡೈಲಾಗ್ ವಿಡಿಯೋ ತುಂಬಾನೇ ಸದ್ದು ಮಾಡಿತ್ತು. ಆದ್ರೆ ಆ ವಿಡಿಯೋ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರು ಏನು ಹೇಳಿದ್ದಾರೆ ಅಂದ್ರೆ, ಬಿಜೆಪಿ ಪಕ್ಷವನ್ನು ದೂರದಲ್ಲಿ ಇಡುವ ಸಲುವಾಗಿ ಸಮ್ಮಿಶ್ರ ಸರ್ಕಾರವನ್ನು ಮಾಡಿದ್ದು, ಸಮ್ಮಿಶ್ರ ಸರಕಾರ ಭದ್ರವಾಗಿದೆ ಅದರಲ್ಲಿ ಅನುಮಾನ ಬೇಡ ಅಂತ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಶಾಂತಿವನ ಪ್ರಕೃತಿ ಚಿಕಿತ್ಸಾಯದಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಹೇಳಿಕೆ ನೀಡಿದ್ದ ವಿಡಿಯೋ ಕುರಿತು ಅವರು ಮಾತನಾಡಿ ‘ವಿಡಿಯೋಗೂ ನನಗೂ ಸಂಬಂಧ ಇಲ್ಲ’ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.!