ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆತಂದವರು ನಾನು ಎಂದು ಹಲವಾರು ವೇದಿಕೆಗಳಲ್ಲಿ ವಿಶ್ವನಾಥ್ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯರು ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದವರು ಯಾರು ಎಂದು ಹೇಳಿದ್ದಾರೆ.

ಕುರುಬ ಸಂಘದ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ನನ್ನನ್ನು ಬೇರೆ ಯಾರೂ ಕಾಂಗ್ರೆಸ್‌ಗೆ ತಂದಿಲ್ಲ ನಾನು ಕಾಂಗ್ರೆಸ್‌ಗೆ ಬರಲು ಕಾರಣ ಅಹ್ಮದ್ ಪಟೇಲ್ ಎಂದು ಹೇಳಿ  ವಿಶ್ವನಾಥ್ ಅವರ ಬಾಯಿ ಮುಚ್ಚಿಸಿದ್ದಾರೆ.