ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನ ಎಲ್ಲಾ ಶಾಸಕರುಗಳಿಗೆ ಖಾಸಗಿ ಹೋಟೆಲ್ ನಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದರು. ಆದರೆ ಈಗಾಗಲೇ ಮಂತ್ರಿ ಸ್ಥಾನದಿಂದ ವಂಚಿತರಾದ ಕೆ ಹಿರಿಯನಾಯಕರು ಔತಣ ಕೂಟಕ್ಕೆ ಹೋಗದೆ ಹೊರಗಡೆ ಉಳಿದಕೊಂಡಿದ್ದಾರೆ.

ಅದರಲ್ಲಿ ಅತೃಪ್ತ ಶಾಸಕರು ಗೈರು ಹಾಜರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಅವರಲ್ಲಿ ಹಿರಿಯ ನಾಯಕರಾಗಿರುವ ಎಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ರೋಶನ್ ಬೇಗ್, ಎಂ.ಕೃಷ್ಣಪ್ಪ, ಸಿ.ಎಸ್.ಶಿವಳ್ಳಿ, ಎಚ್.ಎಂ.ರೇವಣ್ಣ ಔತಣಕೂಟದಿಂದ ದೂರ ಉಳಿದಿದ್ದರು. ಇದರಿಂದ ಈ ಹಿರಿಯರು ತಮಗೆ ಮಂತ್ರಿ ಪಟ್ಟ ಸಿಕ್ಕಿಲ್ಲ ಹಾಗಾಗಿ  ಸಿದ್ದರಾಮಯ್ಯರ ಮೇಲೆ ಮುನಿಸಿಕೊಂಡು ಔತಣ ಕೂಟಕ್ಕೆ ಹೋಗಿಲ್ಲ ಎಂಬ ಸುದ್ದಿ ಹರಡುವುದರ ಜೊತೆಗೆ ಹಿರಿಯರು ಮುಂದಿನ ನಡೆ ಬಗ್ಗೆ ಗೌಪ್ಯವಾಗಿದೆಯಂತೆ.!