ಬೆಂಗಳೂರು: ರಾಜ್ಯದ  22ನೇ ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ಪೂರೈಸಿದ ಸಿದ್ದರಾಮಯ್ಯರಿಗೆ 70 ನೇ ವರ್ಷದ ಹುಟ್ಟಿದಬಕ್ಕೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಶುಭಾಶಯವನ್ನು ಟ್ವಿಟ್ ಮಾಡುವ ಮೂಲಕ ಕೋರಿದ್ದಾರೆ.

ಸಿದ್ದರಾಮಯ್ಯರಿಗೆ   ದೇವರು ದೀರ್ಘ ಆಯಸ್ಸು ಹಾಗೂ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಮ್ಮಿಶ್ರ ಸರ್ಕಾರವನ್ನು ಮುಂದೆ ಕೊಂಡೊಯ್ಯುವಲ್ಲಿ ಅವರ ಸಲಹೆಗಳು ಅಮೂಲ್ಯವಾದದ್ದು.ರಾಜ್ಯವನ್ನು ಪ್ರಗತಿ ಹಾಗೂ ಸಮೃದ್ಧಿಯತ್ತ ಕೊಂಡೊಯ್ಯುವಲ್ಲಿ ಅವರ ಸಲಹೆಗಳು ಮುಖ್ಯ ಎಂದು ಹೇಳಿದ್ದಾರೆ.

ಇದರಿಂದ ದೋಸ್ತಿ ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಕುಮಾರಣ್ಣ ವಿಶಾಲ ಹೃದಯವನ್ನು ಮೆರೆದಿದ್ದಾರೆ.