ಬೆಂಗಳೂರು : ತುಮಕೂರು ಸಿದ್ದಗಂಗಾ ಮಠದ ಶ್ರೀಗಳಿಗೆ ಆರೋಗ್ಯ ದಲ್ಲಿ ಏರು ಪೇರಾಗಿದ್ದರಿಂದ ನಿನ್ನೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

ನಿನ್ನೆ ಸಿದ್ದಗಂಗಾ ಶ್ರೀಗಳು ಡಿಸ್ಚಾರ್ಜ್ ಆಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಹಳೇ ಮಠದ ಕೊಠಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ನಸುಕಿನ ಜಾವವೇ ಎದ್ದಿರುವ ಶ್ರೀಗಳು ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಮೂರ್ನಾಲ್ಕು ದಿನ ಶ್ರೀಗಳಿಗೆ ಮಠದಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ.

ಶ್ರೀಗಳ ಆರೋಗ್ಯವನ್ನು ನೋಡಿಕೊಳ್ಳಲು ನಾಲ್ಕು ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾವಹಿಸಲಿದ್ದಾರೆ.

ಹಾಗಾಗಿ ಕೆಲದಿನಗಳ ಕಾಲ ಭಕ್ತರಿಗೆ ಶ್ರೀಗಳ ದರ್ಶನ ಭಾಗ್ಯವಿಲ್ಲ.