ಬಿಹಾರ: ಇಲ್ಲಿ ಭಾರಿ ಮಳೆಯಾಗುತ್ತಿದ್ದು, ಸಿಡಿಲಿನಿಂದಾಗಿ 10 ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

ಬಿಹಾರದ ಪುರ್ನಿಯಾದಲ್ಲಿ ಮೂವರು, ಬೇಗುಸರಾಯ್ ನಲ್ಲಿ ಇಬ್ಬರು, ಪಟ್ನಾ, ಸಹರ್ಸಾ, ಪೂರ್ವಾ ಚಂಪಾರಣ್, ದರ್ಭಾಂಗ್ ಹಾಗೂ ಮಾಧೋಪುರ್ ದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಬಿಹಾರದಲ್ಲಿ ಕಳೆದ ಮೂರು ವಾರಗಳಿಂದ 160 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.