ಶಿವಮೊಗ್ಗ: ಸಿಗಂದೂರು ದೇವಾಸ್ಥಾನದ ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಹಾಗೂ  ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ಬೆಂಬಲಿಗರ ಎರಡು ಬಣಗಳ ನಡುವೆ ಮಾತಿನ‌ ಚಕಮಕಿ ಬೆಳೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ನಡೆದಿದೆ.

 ದೇವಾಲಯಕ್ಕೆ ಪೂಜೆ ಮಾಡಿಸಲು ಹೋದ ಮಂಜಯ್ಯ ಜೈನ್ ಎಂಬುವರ ಮೇಲೆ ಶೇಷಗಿರಿ ಭಟ್ಟರ ಸಹೋದರರು ಹಲ್ಲೆ ನಡೆಸಿದ್ದು, ಈ ವೇಳೆ ದೇವಾಲಯದ ಆಡಳಿತ ಕಚೇರಿಯ ಗ್ಲಾಸ್ ಗಳು, ಪೀಠೋಪಕರಣಗಳನ್ನು ಕೂಡ ಧ್ವಂಸ ಮಾಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ದೇವಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.!

(ಸಾಂದರ್ಭಿಕ ಚಿತ್ರ)