ಮೈಸೂರು : ಚುಂಚನಕಟ್ಟೆ ಜಲಪಾತ ವೀಕ್ಷಣೆಗೆ ಬಂದಿದ್ದ ಸಿಎಫ್ ಟಿಆರ್ ಐ ಹಿರಿಯ ವಿಜ್ಞಾನಿ ಸೋಮಶೇಖರ್ (40) ನೀರುಪಾಲಾದ ಘಟನೆ ನಡೆದಿದೆ. ಕುಟುಂಬದ ಜೊತೆಗೆ ಜಲಪಾತ ವೀಕ್ಷಣೆಗೆ ಬಂದಿರುವ ವೇಳೆ ಪತ್ನಿ ಮತ್ತು ಮಕ್ಕಳ ಎದುರೇ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ನೀರಿಗಿಳಿದು ಆಟಕ್ಕೆ ನಿಂತಾಗ ಏಕಾಏಕಿ ನೀರನ ಮಟ್ಟ ಹೆಚ್ಚಳವಾಗಿದ್ದು ಸೋಮಶೇಖರ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ನೀರಿನ ರಭಸಕ್ಕೆ ಸಿಲುಕಿದ್ದಾರೆ. ಈ ವೇಳೆ ಸ್ಥಳೀಯರು ಮೂವರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ, ಸೋಮಶೇಖರ್ ಮಾತ್ರ ನೀರಿನ ಹೊಡೆತಕ್ಕೆ ಬಲಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಯಿತು. ಆದ್ರೆ ಇಂದು ಶವ ಪತ್ತೆ ಆಗಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್ ಆಸ್ಪತ್ರೆಗೆ ತರಲಾಗಿದೆ.