ಮಂಡ್ಯ: ಜೆಡಿಎಸ್ ಸಮಾವೇಶದಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ನಟಿ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ. ಈ ವೇಳೆ, ನನ್ನ ಮತ್ತು ಅಂಬರೀಶ್ ನಡುವೆ ಉತ್ತಮ ಒಡನಾಟ ಇತ್ತು. ಆ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ನಾನು ಅವರ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಿದವನಲ್ಲ. ಅಂಬಿ ನಿಧನದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದೇ ನಿಖಿಲ್. ಅಂದು ಮಂಡ್ಯ ಬೇಡ ಎಂದವರು ಇಂದು ಮಾತನಾಡುತ್ತಿದ್ದಾರೆ. ನಾನು ಅಂಬಿಯ ತಮ್ಮನಾಗಿ ಅವರ ಕಾರ್ಯ ನಡೆಸಿ ಕೊಟ್ಟಿದ್ದೆ ಎಂದರು.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ನಾನು ತಮ್ಮನಂತೆ ಮುಂದೆ ನಿಂತು ಅಂಬಿ ಅವರ ಅಂತ್ಯಸಂಸ್ಕಾರ ನಡೆಸಿಕೊಟ್ಟಿದ್ದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹಿರಿಯ ನಟ, ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಹೇಳಿದ್ದು ಹೀಗೆ.
ಅಂಬಿ ಅವರ ಅಂತ್ಯಸಂಸ್ಕಾರವನ್ನು ರಾಜಕೀಯಕ್ಕೆ ಬಳಸುವುದು ತಪ್ಪು. ಯಾರೇ ಆದರೂ ಕೂಡ ಮಾತನಾಡಬಾರದು. ಒಂದು ವೇಳೆ ಮಾತನಾಡಿದಲ್ಲಿ ದುರ್ಬಲದ ಮಾತು ಎಂದು ಪರಿಗಣಿಸಬೇಕಾಗುತ್ತದೆ ಎಂದರು.