ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅನ್ವಯವಾಗುವಂತೆ ಮಹತ್ವದ ಆದೇಶವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೊರಡಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ಮಳೆಯ ಆರ್ಭಟ ಹೆಚ್ಚಿದ್ದು ಜನ ಜೀವನ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಮನೆಗೆ ಹಾನಿಯಾಗಿದ್ದರೆ ತಕ್ಷಣವೇ 10,000 ರೂ., ಮನೆ ಸಂಪೂರ್ಣ ನೆಲಸಮವಾಗಿದ್ದರೆ 5 ಲಕ್ಷ ರೂ. ಹಾಗೂ ಭಾಗಶಃ ಅನಾಹುತ ಸಂಭವಿಸಿದ್ದರೆ ಪರಿಶೀಲಿಸಿ ಪರಿಹಾರ ನೀಡಿ ಎಂದು ತಿಳಿಸುವ ಮೂಲಕ ಈ ಹಿಂದಿನ ನಿಯಮಗಳನ್ನೇ ಪಾಲಿಸಿ ಎಂದು ಖಡಕ್ಕಾಗಿ ಸೂಚಿಸಿದ್ದಾರೆ.