ಬೆಂಗಳೂರು: ಕರ್ನಾಟಕ ಸರಕಾರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವು ಸಿಇಟಿ ಹಾಗೂ ನೀಟ್ ಮೂಲಕ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ [Cat-1, 2A, 3A, 3B] ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸರಕಾರದ ಸಾಲ ಯೋಜನೆ*
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: *08.06.2018*
ರಿಯಾಯತಿ ದರದ ಸಾಲದ ಬಡ್ಡಿದರ: *2% ವಾರ್ಷಿಕ*
ಗರಿಷ್ಟ ಸಾಲದ ಮೊತ್ತ: *ರೂ.1 ಲಕ್ಷ (ಪ್ರತೀ ವರ್ಷಕ್ಕೆ)*

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು (Original)*
1. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ
2. ಜಾತಿ & ಆದಾಯ ಪ್ರಮಾಣಪತ್ರ
3. ಆಧಾರ್ ಕಾರ್ಡು
4. ಸಿಇಟಿ ಹಾಗೂ ನೀಟ್ ಅಡ್ಮಿಟ್ ಕಾರ್ಡು
5. ವಿದ್ಯಾರ್ಥಿಯ ಭಾವಚಿತ್ರ-1
6. ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಭಾವಚಿತ್ರ-1
7. ವಿದ್ಯಾರ್ಥಿಯ ಬ್ಯಾಂಕು ಪಾಸುಪುಸ್ತಕ

ಸೂಚನೆ:: ಅರ್ಜಿ ಸಲ್ಲಿಸಲು ವಾರ್ಷಿಕ ವರಮಾನ *ರೂ.3.5 ಲಕ್ಷಕ್ಕಿಂತ ಕಡಿಮೆ* ಇರಬೇಕು. ಮತ್ತು ಕಡ್ಡಾಯವಾಗಿ ತಹಶೀಲ್ದಾರರಿಂದ ಪಡೆದ ಜಾತಿ & ಆದಾಯ ಪ್ರಮಾಣಪತ್ರವನ್ನು ಒದಗಿಸಬೇಕು