ಚಿತ್ರದುರ್ಗ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ರಾಷ್ಟ್ರಕವಿ ಕುವೆಂಪುರವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ನಗರಸಭೆ, ಸಂಯುಕ್ತಾಶ್ರ ಯದಲ್ಲಿ ನಗರದ ತ.ರಾ.ಸು., ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಮಾತನಾಡಿ, ಕುವೆಂಪುರವರ ರಚನೆ ಮಾಡಿದ ಗೀತೆಯೊಂದನ್ನು ನಮ್ಮ ನಾಡಗೀತೆಯಾಗಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಬರೀ ರಾಜ್ಯ ಮಾತ್ರವಲ್ಲದೆ ದೇಶವನ್ನು ಕುರಿತು ಸಹಾ ವರ್ಣನೆ ಮಾಡಲಾಗಿದೆ, ದೇಶದಲ್ಲಿ ನಾನಾ ರೀತಿಯ ಜನತೆಗಳಿದ್ದರೂ ಸಹಾ ಎಲ್ಲರು ಒಂದೇ ಎನ್ನುವಂತೆ ಬದುಕನ್ನು ನಡೆಸಲಾಗುತ್ತಿದೆ ಇದು ಇದೇ ರೀತಿ ಇರಬೇಕೆಂದು ಕುವೆಂಪು ಆಶಿಸಿದ್ದರು ಎಂದರು.

ಶರಣರು ದಾರ್ಶನಿಕರು ದಾಸರು ಸೇರಿದಂತೆ ಎಲ್ಲರು ಸಹಾ ಎಲ್ಲರಿಗೂ ಲೇಸನ್ನು ಬಯಸುವುದನ್ನು ಹೇಳಿದ್ದರು ಇದೇ ಮಾದರಿಯಲ್ಲಿ ಕುವೆಂಪುರವರು ಬರಿ ಮಾನವರಾಗದೇ ವಿಶ್ವ ಮಾನವರಾಗುವಂತೆ ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಅದರಂತೆ ನಡೆದುಕೊಂಡು ಬೇರೆಯವರಿಗೆ ಮಾದರಿಯಾಗಿ ತಮ್ಮ ಬದುಕನ್ನು ನಡೆಸಿದ್ದಾರೆ. ಮಾನವೀಯತೆಯನ್ನು ಮೈಗೂಡಿಸಿಕೊಂಡು ಬೇರೆಯವರಿಗೆ ಸಹಾಯ ಮಾಡುವ ಗುಣಗಳನ್ನು ಅಳವಡಿಸಿಕೊಳ್ಲುವಂತೆ ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ. ಯಾವುದೇ ಸಮಯದಲ್ಲಿ ಪ್ರಶಸ್ತಿಮ ಗೌರವಗಳಗೆ ಮನ್ನಣೆ ನೀಡದೇ ತಮ್ಮ ಪಾಲಿನ ಕೆಲಸವನ್ನು ಮಾಡುವುದರ ಮೂಲಕ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದರು.

ಕುವೆಂಪುರವರು ಕನ್ನಡಕ್ಕಿಂತ ಆಂಗ್ಲ ಬಾಷೆಯಲ್ಲಿ ಹೆಚ್ಚಿನ ಹಿಡಿತವನ್ನು ಸಾಧಿಸಿದ್ದರು ಆವರ ತಮ್ಮ ಮೊದಲ ಆಂಗ್ಲ ಕೃತಿಯನ್ನು ರಚನೆ ಮಾಡಿ ಅದನ್ನು ಬೇರೆಯವರಿಗೆ ತೋರಿಸಿದಾಗ ಅವರು ಸಾಹಿತ್ಯವನ್ನು ಹೊಗಳುವುದರ ಮೂಲಕ ಇದನ್ನು ನಿಮ್ಮ ಮಾತೃಭಾಷೆಯಲ್ಲಿಯೇ ರಚನೆ ಮಾಡುವಂತೆ ಹೇಳಿದಾಗ ಅದರಿಂದ ಪ್ರೇರೇಪಣೆ ಪಡೆದು ತಮ್ಮ ಮುಂದಿನ ಎಲ್ಲಾ ಸಾಹಿತ್ಯ ಕೃಷಿಯನ್ನು ಕನ್ನಡದಲ್ಲಿಯೆ ಮಾಡಲಾರಂಭಿಸಿದರ. ಇದರಿಂದಾಗಿ ಕನ್ನಡ ಭಾಷೆ ಮತ್ತಷ್ಟು ಶ್ರೀಮಂತವಾಗಲು ಕಾರಣವಾಗಿದೆ ಎಂದು ಶ್ರೀಮತಿ ಸೌಭಾಗ್ಯ ತಿಳಿಸಿದರು.

ಶಿಕ್ಷಕರಾದ ರಂಗನಾಯಕ್ ಕುವೆಂಪುರವರ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಮಹದೇವ ಜೋಷಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ರೇವಣಸಿದ್ದಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ತಿಮ್ಮರಾಯಪ್ಪ, ತಹಶೀಲ್ದಾರ್ ಮಲ್ಲಿಕಾರ್ಜನಪ್ಪ,

ಪೌರಾಯುಕ್ತರಾದ ಚಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ:ದೊಡ್ಡಮಲ್ಲಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ನಿಜಲಿಂಗಪ್ಪ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಶ್ರೀಮತಿ ಜೋತ್ಸ್ನ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕ ಕೃಷ್ಣಪ್ಪ ಸ್ವಾಗತಿಸಿದರೆ ಶಿಕ್ಷಕಿ ಶ್ರೀಮತಿ ಜಯಾ ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿದರು. ಡಿ.ಓ.ಮುರಾರ್ಜಿ ಮತ್ತು ಸಂಗಡಿಗರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.