ಚಿಕ್ಕಮಗಳೂರು : ಸಾಹಿತಿ/ ಕಲಾವಿದರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 1500 ದಿಂದ 2000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಸುಮಾರು 14000 ಜನರು ಮಾಸಾಶನ ಪಡೆಯುತ್ತಿದ್ದಾರೆ ಎಂದು ಸಚಿವ ಸಿ ಟಿ ರವಿಯವರು ತಿಳಿಸಿದ್ದಾರೆ.

ಸಚಿವರಾಗಿ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಕುರಿತಂತೆ ಹೆಜ್ಜೆಗುರುತು ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಸಚಿವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕೋವಿಡ್-19 ಹಿನ್ನೆಲೆಯಲ್ಲಿ ಸಾಂಸ್ಕೃತಿಕ, ಸಾಹಿತಿಕ ಚಟುವಟಿಕೆಗಳಿಗೆ ನಿರ್ಬಂಧ ಜಾರಿಯಲ್ಲಿರುವುದಿರಿಂದ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಾಹಿತಿ/ಕಲಾವಿದರಿಗೆ ರೂ.2000 ಗಳಂತೆ ರಾಜ್ಯದ ಒಟ್ಟು 16924 ಕಲಾವಿದರಿಗೆ 3.38.48.000 ರೂಗಳನ್ನು ಕಲಾವಿದರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಚಿವ ಸಿ ಟಿ ರವಿಯವರು ತಿಳಿಸಿದ್ದಾರೆ.