ನವದೆಹಲಿ: ಲಾಕ್ ಡೌನ್ ಹಿನ್ನೆಲೆ ರಿಸರ್ವ್ ಬ್ಯಾಂಕ್ ಮುಂದಿನ 3 ತಿಂಗಳ ಸಾಲದ ಕಂತ(EMI)ನ್ನು ಕಡಿತಗೊಳಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ.

ಆದರೆ ಇದೇ ಅವಕಾಶವನ್ನು ವರದಾನವನ್ನಾಗಿ ಮಾಡಿಕೊಂಡಿರುವ ಬ್ಯಾಂಕ್ ಗಳು, ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ನಿರ್ಧರಿಸಿವೆ.

ಸಾಲದ ಮೇಲಿನ 3 ತಿಂಗಳ ಬಡ್ಡಿಯನ್ನು ಅಸಲಿಗೆ ಸೇರಿಸಲು ನಿರ್ಧರಿಸಿದ್ದು, ಅಸಲು ಹೆಚ್ಚುವ ಕಾರಣ ಗ್ರಾಹಕರು ಹೆಚ್ಚು ಕಂತುಗಳನ್ನು ಪಾವತಿಸಬೇಕಾಗುತ್ತದೆ. ಈ ತಿಂಗಳುಗಳಲ್ಲಿಯೂ ಕಂತು ಪಾವತಿಸಿದಲ್ಲಿ ಕತ್ತರಿ ಬೀಳುವುದು ತಪ್ಪುತ್ತದೆ.!