ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ  ಫ್ಲೆಕ್ಸ್, ಬ್ಯಾನರ್​ ನಿಷೇಧ ಕಾಯಿದೆ ಜಾರಿಯಾಗಿದ್ದರೂ ಉಲ್ಲಂಘನೆ ಪ್ರಮಾಣ ನಿಲ್ಲದಿರುವದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್​ಗಳನ್ನು ಅಂಟಿಸಿದರೆ ಶಿಕ್ಷಾರ್ಹ ಅಪರಾಧ ಎಂದು ನಗರ ಪೊಲೀಸ್​​ ಆಯುಕ್ತರು ಸಾರ್ವಜನಿಕ ಪ್ರಕಟಣೆ ತಿಳಿಸಿದ್ದಾರೆ.

ಕೆಓಪಿಡಿ ಆ್ಯಕ್ಟ್ 1981ರ ಅಡಿಯಲ್ಲಿ ಆರು ತಿಂಗಳ ಸಜೆ ಅಥವಾ ಒಂದು ಸಾವಿರ ರೂ.ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)