ಬೆಂಗಳೂರು : ಸಾರಿಗೆ ನೌಕರರ ಸಂಬಳವನ್ನು 3-4 ದಿನಗಳಲ್ಲಿ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು  ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ.

ಕೋವಿಡ್-19 ನಿಯಂತ್ರಣದ ಸಂಬಂಧ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮೇ.17ರವರೆಗೆ ಲಾಕ್ ಡೌನ್ ಕೂಡ ಮುಂದುವರೆಯಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸಾರಿಗೆ ನೌಕರರ ವೇತನವನ್ನು ರಾಜ್ಯ ಸರ್ಕಾರ ನೌಕರರ ಖಾತೆಗೆ ಜಮೆ ಮಾಡಿರಲಿಲ್ಲ. ಹೀಗಾಗಿ ಲಾಕ್ ಡೌನ್ ಆರ್ಥಿಕ ಸಂಕಷ್ಟದಿಂದಾಗಿ ಸಾರಿಗೆ ನೌಕರರ ಸಂಬಳಕ್ಕೂ ಸರ್ಕಾರ ಕತ್ತರಿ ಹಾಕಿತಾ ಎಂಬ ಆತಂಕದಲ್ಲಿದ್ದರು. ಇದೀಗ ಇಂತಹ ನೌಕರರಿಗೆ ಮೂರು ನಾಲ್ಕು ದಿನಗಳಲ್ಲಿ ಸಂಬಳವನ್ನು ನೌಕರರ ಖಾತೆಗೆ ಜಮೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.