ಬೆಂಗಳೂರು :, ರಾಜ್ಯದ ನಾಲ್ಕು ನಿಗಮಗಳ ನೌಕರರ ಏಪ್ರಿಲ್ ತಿಂಗಳ ಸಂಬಳ ಪಾವತಿಗಾಗಿ 325 ಕೋಟಿ ರೂ. ಸರಕಾರ ಅನುದಾನ ಬಿಡುಗಡೆಮಾಡಿದೆ.

ಲಾಕ್ ಡೌನ್ ನಿಂದ ಆದಾಯವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದ ನಾಲ್ಕು ಸಾರಿಗೆ ನಿಗಮಗಳು, ನೌಕರರ ವೇತನ ಪಾವತಿಸಲು ಮಾಸಿಕ 464 ಕೋಟಿ ರೂ. ನಂತೆ ಮೂರು ತಿಂಗಳಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಏಪ್ರಿಲ್ ತಿಂಗಳ ವೇತನ ಪಾವತಿಗೆ 325 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು ಮೇ ತಿಂಗಳ ವೇತನ ಪಾವತಿಗೆ ಶೇ. 50 ರಷ್ಟು ಅಂದರೆ 162.50 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದು ತಿಳಿದುಬಂದಿದೆ.