ಚಿತ್ರದುರ್ಗ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಸ್ಥಳೀಯರಿಗೆ ಅವಕಾಶ ಸಿಗಲಿಲ್ಲ ಎಂಬ ವಾದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ದನಿಗಳ ಪ್ರತಿರೂಪವಾಗಿ ಬಿಸಿಸುದ್ದಿ.ಕಾಂ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ವಲಸಿಗರಿಗೆ ಯಾಕೆ ಟಿಕೆಟ್ ? ಎಂಬ ಅಭಿಯಾನ ಆರಂಭಿಸಿದೆ. ಇದು ಪೂರ್ಣ ಪ್ರಮಾಣದ ಜನಾಭಿಪ್ರಾಯ ಸಂಗ್ರಹದ ಅಭಿಯಾನ. ಪರ ಹಾಗೂ ವಿರೋಧ ಅಭಿಪ್ರಾಯಗಳಿಗೆ ಇಲ್ಲಿ ಮುಕ್ತ ಅವಕಾಶವಿದೆ.

ಆದರೆ ಕೆಲವರು ಇದು ಸಂವಿಧಾನ ವಿರೋಧಿ ನಿಲುವು, ಅಪ್ರಬುದ್ಧ ಅಭಿಯಾನ ಎಂದೆಲ್ಲಾ ಹೇಳಿದ್ದಾರೆ. ಪ್ರತಿ ವ್ಯಕ್ತಿ, ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗೆ ತಕ್ಕಂತೆ ಅವಕಾಶ ಸಿಗಬೇಕು ಎಂಬುದು ಸಂವಿಧಾನದ ಸ್ಥಾಯಿಭಾವ (ಮೂಲ ಆಶಯ). ಚಿತ್ರದುರ್ಗದ ಇತಿಹಾಸದಲ್ಲಿ ಒಂದೆರೆಡು ಉದಾಹರಣೆ ಬಿಟ್ಟರೆ ಬಹುತೇಕ ಇಲ್ಲಿನವರಿಗೆ ಅವಕಾಶ ಸಿಕ್ಕಿಲ್ಲ. ಅದರಂತೆ ಇಲ್ಲಿನ ಅರ್ಹರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯ ಪರಿಪಾಲಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಆಗ್ರಹಿಸಲು ಸಂವಿಧಾನವೇ ಅವಕಾಶ ಕಲ್ಪಿಸಿದೆ. ಅದರಂತೆ ಕೆಲ ವರ್ಷಗಳಿಂದ ಹಲವರು ಈ ರೀತಿ ಹೋರಾಟ ಶುರು ಮಾಡಿದ್ದಾರೆ.

ಇನ್ನು ಅಭಿಯಾನ ಬೆಂಬಲಿಸಿ ಜಿಲ್ಲೆಯ ಹಲವು ಜನರು ಹಾಗೂ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಬಿಸಿಸುದ್ದಿ.ಕಾಂ ಅದನ್ನು ಯಥಾವತ್ತಾಗಿ ದಾಖಲಿಸುತ್ತಿದೆ. ಮೊದಲೇ ಹೇಳಿದಂತೆ ಇದು ಜನಾಭಿಪ್ರಾಯ ಸಂಗ್ರಹದ ಅಭಿಯಾನ. ಇದು ಯಾರ ಪರ ಹಾಗೂ ವಿರೋಧ ಎಂಬ ಪ್ರಶ್ನೆಯೇ ಇಲ್ಲ. ನಿಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಬಹುದು. ಅವುಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾತ್ರ ನಮ್ಮದು

ಸಂಪಾದಕರು
ಬಿಸಿ ಸುದ್ದಿ. ಡಾಟ್ ಕಾಂ.
ವಾಟ್ಸ್ ಆಪ್ ನಂಬರ್.
9916881352