ಚಿತ್ರದುರ್ಗ: ಭಾರತ ಸನಾತನ ಕಾಲದಿಂದಲೂ ಹಿಂದು ರಾಷ್ಟ್ರ. ಈಗ ಹೊಸದಾಗಿ ಹಿಂದು ರಾಷ್ಟವಾಗಿ ಮಾಡುವುದು ಬೇಡ ಇದರ ಬದಲಾಗಿ ಎಲ್ಲರು ಸಾತ್ವಿಕವಾದ ಆಹಾರ ಮತ್ತು ಮಧ್ಯಪಾನವನ್ನು ನಿಷೇಧ ಮಾಡಿದರೆ ದೇಶ ತಾನಾಗಿಯೇ ಹಿಂದು ರಾಷ್ಟ್ರವಾಗುತ್ತದೆ ದೇಶದಲ್ಲಿ ಮಧ್ಯಪಾನ ನಿಷೇಧದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುವುದಾಗಿ ರಾಷ್ಟ್ರಸಂತ ಮುನಿಶ್ರೀ ಚಿನ್ಮಯ ಸಾಗರಜೀ ಮಹರಾಜ್, ಜಂಗಲ್‌ವಾಲೆ ಬಾಬಾ ತಿಳಿಸಿದರು.
ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಅವರು ನಗರದ ರಂಗಯ್ಯನಬಾಗಿಲು ಬಳಿಯ ಮಾದಪ್ಪ ಕಾಂಪೌಂಡ್‌ನಲ್ಲಿ ಶ್ರೀ ಮಹಾವೀರ ದಿಗಂಬರ ಜೈನಸಂಘದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಎಲ್ಲರು ಹಿಂದು ರಾಷ್ಟ್ರ ಹಿಂದು ದೇಶ ಎಂಬುದಾಗಿ ಮಾತನಾಡುತ್ತಾರೆ ಆದರೆ ಅದಕ್ಕೆ ತಕ್ಕಂತೆ ನಡೆಯುತ್ತಿಲ್ಲ, ದೇಶದಲ್ಲಿ ಶಾಂತಿ ಎನ್ನುವುದು ಮರೆಯಾಗುತ್ತಾ ಭಯದ ವಾತಾವರಣ ಸೃಷ್ಟಿಯಾಗಿದೆ, ಈ ಹಿಂದೆ ಶಾಂತಿಯ ದೇಶವಾಗಿದ್ದ ಭಾರತ ಈಗ ಅಶಾಂತಿಯ ವಾತಾವರಣ ಕಂಡು ಬರುತ್ತಿದೆ ಎಂದು ವಿಷಾಧಿಸಿದರು.
ಸರ್ಕಾರ ಜನತೆಗೆ ಸೌಲಭ್ಯಗಳನ್ನು ನೀಡಲಿ ಅದರೆ ಅದರಿಂದ ಜನತೆಯ ಸೋಮಾರಿಗಳಾಗಬಾರದು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಮೂಲಕ ಅಭೀವೃದ್ದಿಯನ್ನು ಕಾಣಬೇಕಿದೆ, ಯುವಜನತೆಯಲ್ಲಿ ದೇಶಾಭೀಮಾನ ಕಡಿಮೆಯಾಗಿ ಸ್ವಾರ್ಥ ಹೆಚ್ಚಾಗುತ್ತಿದೆ ನಾನು ಮಾತ್ರ ಬೆಳೆಯಬೇಕು ಎಂಬ ಮನೋಭಾವ ಜಾಸ್ತಿಯಾಗುತ್ತಿದೆ, ಇದರಿಂದ ದೇಶದ ಪ್ರಗತಿಗೆ ಧಕ್ಕೆಯಾಗುತ್ತದೆ ಮನೆಯಲ್ಲಿಯೂ ಸಹಾ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಜವಾಬ್ದಾರಿಯಿಂದ ಬೆಳಸಬೇಕಿದೆ, ನಮ್ಮ ದೇಶದಲ್ಲಿ ಎಲ್ಲವನ್ನು ಕಲಿತು ಅದರ ಪ್ರಯೋಜನ ಮಾತ್ರ ಬೇರೆ ದೇಶಗಳು ಪಡೆಯುತ್ತಿರುವುದು ದೇಶದ ದೌಭಾಗ್ಯ ಎಂದರು,
ಇಂದಿನ ರಾಜನೀತಿಯೂ ಸರಿಯಿಲ್ಲ ಹಿಂದೆ ಇದ್ದ ಸಮಾಜ ಸೇವೆ, ಸ್ವಾಬಿಮಾನ ಕಡಿಮೆಯಾಗಿ ಸ್ವಾರ್ಥ ಅಧಿಕಾರ ಮತ್ತು ಹಣಕ್ಕಾಗಿ ರಾಜನೀತಿ ಎನ್ನುವಂತಾಗಿದೆ, ನಮ್ಮಲ್ಲಿ ಸಂಪತ್ತು ಹೇರಳವಾಗಿದೆ ಆದರೆ ಅದರ ಉಪಯೋಗ ಮಾತ್ರ ಸರಿಯಾದ ರೀತಿಯಲ್ಲಿ ಆಗಿಲ್ಲ, ಇದು ಸರಿಯಾದ ರೀತಿಯಲ್ಲಿ ಆಗಬೇಕಾದರೆ ರಾಜನೀತಿ ಸರಿಯಾಗಿ ಇದ್ದರೆ ಮಾತ್ರ ಅವರಲ್ಲಿ ಸಮಾಜಸೇವೆಯಲ್ಲಿ ನಿಸ್ವಾರ್ಥತೆ ಇದ್ದಾಗ ಮಾತ್ರ ಇದು ಸಾಧ್ಯ ಇದಕ್ಕೂ ಮುನ್ನಾ ಜನತೆಯೂ ಸಹಾ ನಿಸ್ವಾರ್ಥದಿಂಧ ಉತ್ತಮವಾದ ಜನನಾಯಕನನ್ನು ಆಯ್ಕೆ ಮಾಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮುಂದಾಗಬೇಕಿದೆ. ಇಲ್ಲಿ ಮತದಾರ ಭಷ್ಟನಾದರೆ ಇವರಿಂದ ಆಯ್ಕೆಯಾದ ಜನನಾಯಕನು ಸಹಾ ಭಷ್ಟನಾಗುತ್ತಾನೆ ಎಂದು ಟೀಕಿಸಿದರು.
ಇಂದಿನ ದಿನಮಾನದಲ್ಲಿ ಪರಿಸರದ ಬಗ್ಗೆ ಕಾಳಜಿ ಜನತೆಯಲ್ಲಿ ಕಡಿಮೆಯಾಗುತ್ತಿದೆ ಇದರಿಂದಾಗಿ ಮಳೆಯ ಪ್ರಮಾಣವೂ ಸಹಾ ಕಡಿಮೆಯಾಗಿ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಮುಂದಿನ ದಿನಮಾನದಲ್ಲಿ ಪರಿಸರದ ಬಗ್ಗೆ ಕಾಳಜಿವಹಿಸದಿದ್ದರೆ ಮತ್ತಷ್ಟು ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದ ಎಚ್ಚರಿಸಿ ಪರಿಸರ ನಾಶವಾದರೆ ಬರೀ ಜನ ಮಾತ್ರವಲ್ಲ ಜಾನುವಾರುಗಳು ಪ್ರಾಣಿ, ಪಕ್ಷಿ ಸಂಕುಲಗಳು ಸಹಾ ನಾಶವಾಗುತ್ತದೆ ಇದರಿಂದ ಪ್ರದೇಶ ಬರಡಾಗಿ ಮರುಭೂಮಿಯಾಗುತ್ತದೆ ಎಂದು ತಿಳಿಸಿ ಇದರ ಬಗ್ಗೆ ಎಚ್ಚರವಾಗಿರಬೇಕಿದೆ ಎಂದು ಚಿನ್ಮಯ ಸಾಗರಜೀ ಮಹರಾಜ್ ಹೇಳಿದರು.
ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ವಿ.ಆರ್. ನಾಗರಾಜುಯ್ಯ, ಶಿಕ್ಷಕರಾದ ನಿರಂಜನ ದೇವರಮನೆ, ರುದ್ರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಕಳಸದ ನಿರ್ಮಾಣಕ್ಕಾಗಿ ಪೂಜೆಯನ್ನು ನೇರವೇರಿಸಲಾಯಿತು.