ಗೋಕಾಕ : ನಮ್ಮಣ್ಣ ಸತೀಶ್ ಜಾರಕಿಹೊಳಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನನ್ನ ಗುರಿ ಎಂದು ತಮ್ಮ ರಮೇಶ್ ಜಾರಕಿಹೊಳಿ ಮಾತು.

ಸುದ್ದಿಗಾರರೊಂದಿಗ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬಕ್ಕೆ ತನ್ನದೇ ಆದ ಇತಿಹಾಸವಿದೆ. ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದೆ. ಪಕ್ಷದಲ್ಲಿನ ಕೆಲ ಕಾಣದ ಕೈಗಳು ನಮ್ಮ ಕುಟುಂಬದ ಏಳ್ಗೆಯನ್ನು ಸಹಿಸದೆ ಪಿತೂರಿ ನಡೆಸಿವೆ. ಇಂಥ ಪಿತೂರಿಗಳಿಂದ ಮನಸ್ಸಿಗೆ ನೋವಾಗಿದೆ ಎಂದರು.

ಆಪ್ತ ಶಾಸಕರೊಂದಿಗೆ ಬಿಜೆಪಿ ಸೇರುತ್ತೇನೆ ಎನ್ನುವ ವದಂತಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ರು.