ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯು ವಿವಿಧ ವೃಂದದ ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸ್ವೀಕೃತಿ ದಿನಾಂಕಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಸಶಸ್ತ್ರ ಮೀಸಲು ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 25 ಆಗಿದ್ದು, ವೈರ್‌ಲೆಸ್‌ ಸಬ್‌-ಇನ್ಸ್‌ಪೆಕ್ಟರ್‌, ಕೈಗಾರಿಕಾ ಭದ್ರತಾ ಪಡೆ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ‌ಜುಲೈ 27 ಕಡೆ ದಿನಾಂಕವಾಗಿದೆ.