ಬೆಂಗಳೂರು : ರಾಜ್ಯ ಸರ್ಕಾರವು ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ಶಿಕ್ಷರಿಗೆ ವೇತನ ಬಿಡುಗಡೆಯಲ್ಲಾಗುತ್ತಿದ್ದ ತಾಂತ್ರಿಕ ಸಮಸ್ಯೆಯನ್ನು ರಾಜ್ಯ ಸರ್ಕಾರ ಸರಿಪಡಿಸಿದ್ದು, ಇನ್ಮುಂದೆ ಸಮಗ್ರ ಶಿಕ್ಷಣ ಶಿಕ್ಷಕರಿಗೆ ಯಾವುದೇ ಸಮಸ್ಯೆ ಇಲ್ಲದೇ ವೇತನ ಬಿಡುಗಡೆ ಆಗಲಿದೆ.

ಆರ್ಥಿಕ ಇಲಾಖೆಯ ಲೆಕ್ಕ ಶೀರ್ಷಿಕೆ 19 ರಲ್ಲಿ ಎಸ್‌ಎಸ್‌ಎ ಶಿಕ್ಷಕರಿಗೆ ಹಾಗೂ ಲೆಕ್ಕ ಶೀರ್ಷಿಕೆ 69 ರಲ್ಲಿ ಆರ್ ಎಂಎಸ್ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಲಾಗುತ್ತಿತ್ತು. ಈ ಎರಡೂ ವಿಭಾಗ ಸೇರಿ ಸುಮಾರು 35 ಸಾವಿರ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಲಾಗುತ್ತಿತ್ತು. ಇನ್ಮುಂದೆ ಲೆಕ್ಕ ಶೀರ್ಷಿಕೆ 19 ರ ಅಡಿ ಸಮಗ್ರ ಶಿಕ್ಷಣ ಶಿಕ್ಷಕರ ವೇತನ ಬಿಡುಗಡೆ ಆಗಲಿದೆ.

ಲೆಕ್ಕ ಶೀರ್ಷಿಕೆ ಒಂದೇ ಮಾಡಿರುವುದರಿಂದ ಅನುದಾನ ಬಿಡುಗಡೆ ಆದೇಶವನ್ನು ಶಿಕ್ಷಣ ಇಲಾಖೆಗೆ ನೀಡಿರುವುದರಿಂದ ರಾಜ್ಯದಲ್ಲಿರುವ ಸುಮಾರು 2.5 ಲಕ್ಷ ಶಿಕ್ಷಕರಿಗೆ ವೇತನ ನೀಡುವಂತೆ ಆರ್ ಎಂಎಸ್ ಎ ಶಿಕ್ಷಕರಿಗೂ ವೇತನ ಬಿಡುಗಡೆ ಆಗಲಿದೆ.