ಬೆಂಗಳೂರು: ಕೊರೋನಾ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಸಂಬಂಧಪಟ್ಟ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಪಿಇ ಕಿಟ್ ಆಂಬ್ಯುಲೆನ್ಸ್ ನಲ್ಲಿ ಹಣ ಮಾಡೋಕೆ ಹೋಗಿದ್ದಾರೆ. ಯಡಿಯೂರಪ್ಪನವರೇ ನಿಮಗೆ ತಾಕತ್ತಿದ್ದರೆ, ಈ ಪ್ರಕರಣವನ್ನು ಹೈಕೋರ್ಟ್ ಸಿವಿಲ್ ನ್ಯಾಯಾಲಯಕ್ಕೆ ಕೊಡಿ. ಜಿಲ್ಲಾ ಸಚಿವರು ಯಾವ ಆಸ್ಪತ್ರೆಗೆ ಹೋಗಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.