ಬೆಂಗಳೂರು : ಕೃಷಿ ಸಚಿವ ಬಿ.ಸಿ.ಪಾಟೀಲ್, ಅವರು ಮಾತನಾಡಿ ರೈತರ ಖಾತೆಗೆ ಜಮಾ ಆಗುವ ಸಬ್ಸಿಡಿ ಹಣವನ್ನು ಬ್ಯಾಂಕುಗಳು ಸಾಲಕ್ಕಾಗಿ ಜಮಾ ಮಾಡಿಕೊಳ್ಳುವಂತಿಲ್ಲ. ಇಂತಹ ಪ್ರಕರಣ ಮರುಕಳಿಸಿದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಸರ್ಕಾರ ರೈತರಿಗಾಗಿ ಸಬ್ಸಿಡಿ ನೀಡುತ್ತಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಹಾಯಧನ ಫಲಾನುಭವಿಗಳಿಗೆ ಸೇರಬೇಕು. ಹಾಗಾಗಿ ರೈತರ ಖಾತೆಗೆ ಜಮಾ ಆಗುವ ಸಬ್ಸಿಡಿ ಹಣವನ್ನು ಬ್ಯಾಂಕುಗಳು ಸಾಲಕ್ಕಾಗಿ ಜಮಾ ಮಾಡಿಕೊಳ್ಳುವಂತಿಲ್ಲ ಖಡಕ್ ಸಂದೇಶ ನೀಡಲಾಗಿದೆ.!